ಕೆಲ ತಿಂಗಳಿಗೆ ಮೊದಲು ಗೆಳೆಯರೊಡನೆ ರಾಮನಗರಕ್ಕೆ ಹೋಗಿದ್ದೆ. ಅವತ್ತಿನಿಂದಲೂ ರಾಮನಗರದ ಬೆಟ್ಟಗಳನ್ನೆಲ್ಲ ಹತ್ತಿಳಿಯಬೇಕೆಂಬ ಚಟ ಹತ್ತಿಕೊಂಡಿದೆ. ಮುಂಜಾನೆ ಹತ್ತಿದ ರಾಮದೇವರ ಬೆಟ್ಟ, ಅದರೆದುರಿಗಿನ ಗುಹೆಯಿರುವ ಬೆಟ್ಟ ಎಲ್ಲವೂ ದೇಹದ ಬಹುತೇಕ ಬೆವರನ್ನು ಹೀರಿದ್ದವು ಅವತ್ತು.
ಕಳೆದ ತಿಂಗಳು ಆಫೀಸಿನಿಂದ ಮತ್ತೆ ರಾಮನಗರಕ್ಕೆ ಪುಟ್ಟ ಪಿಕ್ ನಿಕ್ ಹೊರಟಾಗ ಅದೇ ಗುಂಗಿನಲ್ಲಿದ್ದೆ.. ಗಡಣದಲ್ಲಿ ಹೋಗಿ ಸುತ್ತುವುದು ಹೊಸದಲ್ಲದ್ದರಿಂದ ಹೇಳಿಕೊಳ್ಳುವಂತಹ ನಿರೀಕ್ಷೆಗಳಿರಲಿಲ್ಲ. ನಮ್ಮ ಅಪರಿಮಿತ ಉತ್ಸಾಹಗಳನ್ನೆಲ್ಲವೂ ಅದುಮಿಯೇ ಇಡಬೇಕಾದ ಪರಿಸ್ಥಿತಿ ಗುಂಪಿನಲ್ಲಿದ್ದಾಗ ಇರುತ್ತದೆ. ರಾಜಸ್ಥಾನ, ಸಿಕ್ಕಿಂ, ಬಂಗಾಳದ ಟೈಗರ್ ಹಿಲ್ ಹೀಗೆ ಅನೇಕ ಪ್ರವಾಸಗಳಲ್ಲಿ ಇದು ಅನುಭವಕ್ಕೆ ದಕ್ಕಿದೆ. ನನ್ನ ಮಟ್ಟಿಗಂತೂ ಇದು ಚೇತೋಹಾರಿಯಲ್ಲ. ಹೇಳುವವರು, ಕೇಳುವವರು ಇಲ್ಲದೆ ಮಂಗನಂತಾಗುವುದರಲ್ಲೇ ನಿಜವಾದ ಜಂಗಮ ಖುಷಿಯಿರುವುದು….! ಹೀಗಿದ್ದರೂ ರಾಮನಗರದ ಕೆಲ ಚಟುವಟಿಕೆಗಳು ಮಸ್ತಾಗಿದ್ದವು. ಸೂರ್ಯ ಕಂತುವವರೆಗೂ ರಾಮದೇವರ ಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ನಮ್ಮ ಚೇಷ್ಟೆಗಳು ಸಾಗಿದ್ದವು. ಅದರ ಕೆಲವು ಮೆಲುಕುಗಳು ಇಲ್ಲಿವೆ.
ನಾನು, ರಾಘವೇಂದ್ರ, ಕಲಾವಿದರಾದ ಗುಜ್ಜಾರ್, ಲಕ್ಷ್ಮಿ ನಾರಾಯಣ್ ಜೊತೆಯಾಗಿ…
ಮತ್ತೊಮ್ಮೆ ರಾಮನಗರ ಯಾವಾಗ ಕರೆಸಿಕೊಳ್ಳುವುದೋ…..?!!! 🙂
ನಿಮ್ಮದೊಂದು ಉತ್ತರ