ಒಂದಿಷ್ಟು ಚಿತ್ರಿಕೆಗಳು

ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ್ದವ ಪ್ರತಿ ಹನಿಯಲ್ಲೂ ಅವಳನ್ನೇ ಹುಡುಕುತ್ತಿದ್ದ. ಅವಳು ಕಾಣಲೇ ಇಲ್ಲ. ದಿಗಿಲಾಗಿ ತಲೆಯೆತ್ತಿದ. ಆಕಾಶವಿರಲಿಲ್ಲ ಅಲ್ಲಿ. ಆಕೆಯ ಕಣ್ಣುಗಳಿದ್ದವು!

ಹೀಗೆ ಒಂದು ಬೆಳದಿಂಗಳ ರಾತ್ರಿ ಮಗುವಿಗೆ ತುತ್ತು ಉಣಿಸಲು ತಾಯಿ ಹರ ಸಾಹಸ ಪಡುತ್ತಿದ್ದಳು. ನೀ ತಿನ್ನದಿದ್ದರೆ
 ಚಂದಿರಗೇ ಇವೆಲ್ಲಾ ಎಂದು ಸಣ್ಣಗೆ ಗದರುತ್ತಿದ್ದಳು. ಅವತ್ತು ಚಂದಿರನೇ ಬಂದು ಉಂಡು ಹೋದ ಮತ್ತು ಅವತ್ತಿನಿಂದ ಅವ ಅನಾಥನಾದ!

ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ. ಬರಗಾಲ ಬಂದಿತು. ಬಂದೂಕುಗಳೆಲ್ಲಾ ಸತ್ತು ಹೋದವು. ಮಳೆ ಬಂದಿತು. ಆದರೆ ಗುಂಡುಗಳದ್ದಲ್ಲ!

ಕಪ್ಪು ಹೊಲವ ತಬ್ಬಿದ ಸೂರ್ಯಕಾಂತಿಯ ಮುಖದ ಮೇಲೆ ಮುಗಿಲಲ್ಲಿ ಮೂಡಿದ ಕಾಮನಬಿಲ್ಲು ಸತ್ತು ತೇಲುತ್ತಿತ್ತು!

(ಕ್ಯಾನ್‌ವಾಸ್‌ನಲ್ಲಿ ಕೆತ್ತುವ ಪೇಂಟಿಂಗ್‌ನಂತ ಸಾಲುಗಳೆಂದರೆ ಅದೇನೋ ಆಕರ್ಷಣೆ. ಅದಕ್ಕೇ ಅವನ್ನು ಚಿತ್ರಿಕೆಗಳು ಅಂತಲೇ ಕರೆಯಬೇಕೆನಿಸಿತು. ಇಂತಹ ಸಾಲುಗಳು ತಾವಾಗೇ ಹುಟ್ಟಿಕೊಳ್ಳುತ್ತವೆ. ನಂತರ ವಲಯವೊಂದನ್ನು ನಿರ್ಮಿಸುತ್ತವೆ.ಮತ್ತೆ ಮತ್ತೆ ಓದಿದಾಗ ಹೊಸ ಅರ್ಥಗಳನ್ನು ನೇಯುತ್ತವೆ. ಅಂತೆಯೇ ಕೆಲವು ಸಾಲುಗಳು ಹುಟ್ಟಿಕೊಂಡಿವೆ. )

Comments on: "ಒಂದಿಷ್ಟು ಚಿತ್ರಿಕೆಗಳು" (7)

  1. Pink Floyd lyricsನ ಕನ್ನಡದಲ್ಲಿ ಓದಿದ ಹಾಗೆ ಅನ್ನಿಸ್ತು.. Super..

  2. ಚೆನ್ನಾಗಿದೆ…ಇನ್ನಷ್ಟು ಚಿತ್ರಿಕೆಗಳು ಹೊರಬರಲಿ.

  3. ‘Pink Floyd’ nanu odilla. aadaroo inta salugalu matte matte hummassu koduttave. ene irali. Kamentisiddakke ashwin gu, karthik gu dhanyavadagalu…

  4. hhmmm nange bere yav hesru ishta aaglilla, adke aa hesru choose madiddu, n one more thing nim baraha ishta aaytu sir, thank u.

    from
    saviganasu…

  5. ಬರಹ ಮತ್ತು ಚಿತ್ರಗಳು ಎರೆಡರಲ್ಲೂ ಉಡಾಫೆಯಿದೆ, ಬೇಕಾದ್ರೆ ನೋಡಿ ಬಿಟ್ರೆ ಬಿಡಿ ತರಹದ್ದು.. interesting.

  6. ಎಲ್ಲಾ ಕಮೆಂಟುದಾರರಿಗೂ ಧನ್ಯವಾದಗಳು…
    – ಪ್ರವೀಣ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: