ಮುಚ್ಚಿದ ಬಾಗಿಲುಗಳನ್ನು
ತೆರೆದ ಕಿಟಕಿಗಳು
ಸಮಾಧಾನಿಸುತ್ತಿದ್ದವು!
ಕನ್ನಡಿಯ ತುಂಬೆಲ್ಲಾ
ಸೀಳುಗಳು, ಛಿದ್ರ ಚಿತ್ತಾರ
ಪ್ರತಿ ಚೂರೂ ನಿನ್ನ ನೆನಪನ್ನೇ ಸಾರುತ್ತಿತ್ತು
ಬರುವನ್ನೇ ಕಾಯುತ್ತಿತ್ತು.
ಸುಭೀಕ್ಷವಾದ ಒಂದೂರಿನಲ್ಲಿ ಜನರಿಗೆ ತಮ್ಮ ಕೆಲಸದ ಸಮಯ ಗ್ರಹಿಸಲು ಯಾವುದೇ ಮಾಧ್ಯಮ ಇರಲಿಲ್ಲ. ಬುದ್ಧಿವಂತನೊಬ್ಬ ಬೆಳಿಗ್ಗೆ, ಸಂಜೆ ಬಾನಲ್ಲಿ ಹಾರುವ ಹಕ್ಕಿಗಳ ಪುಕ್ಕ ಹಿಡಿದು ಸಮಯ ಗುರುತಿಸಿದ. ಕೆಲವು ದಿನಗಳಲ್ಲಿ ಆ ಊರಿನ ತುಂಬಾ ಪುಕ್ಕಗಳೇ ತುಂಬಿಕೊಂಡವು. ನಂತರ ಪುಕ್ಕಗಳೇ ಸಿಗುತ್ತಿರಲಿಲ್ಲ. ಈ ನಡುವೆ ಊರಿನ ಎಲ್ಲರೂ ಬಿಲ್ಲುವಿದ್ಯಾ ಪ್ರವೀಣರಾಗಿದ್ದರು!
ಬಿಚ್ಚಲು ನವಿಲಿಗೆ ಗರಿಗಳೇ ಇರಲಿಲ್ಲ. ಉದುರಿದ ಎಲ್ಲಾ ಗರಿಗಳ ಮುಖದಲ್ಲೂ ಒಂದೊಂದು ನವಿಲು ಗರಿ ಬಿಚ್ಚಿ ನರ್ತಿಸುತ್ತಿತ್ತು. ಆ ಎಲ್ಲಾ ನವಿಲುಗಳ ಗರಿಗಳ ಮೇಲೂ ಹೆಣ್ಣು ನವಿಲುಗಳು ಕಣ್ಣು ಮುಚ್ಚಿ ಕುಳಿತಿದ್ದವು!
ಕತ್ತಲೆಯ ಕೋಣೆಯೊಳಗಿನ ಕಣವೊಂದು ಉಸಿರಾಡಲು ಕಷ್ಟವಾಗಿ ಪಕ್ಕದ ಕಣದಲ್ಲಿ ತನ್ನ ಕಷ್ಟ ತೋಡಿಕೊಂಡಿತು. ಈ ವಿಷಯ ಎಲ್ಲವಕ್ಕೂ ಗೊತ್ತಾಗಿ, ಎಲ್ಲವೂ ಸೇರಿ ಕಿಟಕಿ ತೆರೆದವು. ಗಾಳಿ ಮತ್ತು ಬೆಳಕು ಒಟ್ಟಾಗೇ ಬಂದವು.
Comments on: "ಒಂದಿಷ್ಟು ಸುಮ್ಮನೆ ಸಾಲುಗಳು" (2)
ಸುಮ್ಮನೆ ಬರೆದರೂ ಹೀಗೆ ಬರೆಯುತ್ತೀರಲ್ಲಾ.. ಇನ್ನೂ ಬರೆಯಬೇಕೆಂದೇ ಬರೆದರೆ ಹೇಗೆ ಹೆಂಗೆ ಅಂತಾ….! ಏನೋ ಸ್ವಾಮಿ…. ಒಟ್ಟಿನಲ್ಲಿ ಹಿಂಗೆ ಬರೆಯುತ್ತೀರಿ……
-ಜಿತೇಂದ್ರ
Great kano… Really nice….words should be your world..keep it up dear….