ಹೆಡ್ಡಿಂಗ್ ಬರೆದು ಎನು ಬರೆಯೋದು ಅಂತ ಯೋಚಿಸುತ್ತಿದ್ದೇನೆ. ಅದು ದೀಪವೋ, ಬೆಂಕಿಯೋ ಎಂಬುದನ್ನೂ ನಿರ್ಧರಿಸಲಾರದಂತಾಗಿದ್ದೇನೆ. ಬ್ಲಾಗ್ ಕಡೆಗೊಂದು ದಿವ್ಯ ನಿರ್ಲಕ್ಷ್ಯ ಬಿಸಾಕಿ ತಿಂಗಳುಗಳೇ ಸರಿಯಿತು. ಅಂತದ್ದೊಂದು ನಿರ್ಲಕ್ಷ್ಯಕ್ಕೆ ಸೋಮಾರಿತನವೆನ್ನುವುದೇ ಸೂಕ್ತವೇನೋ. ಅದೇನೇ ಇರಲಿ ಕಳೆದ ತಿಂಗಳು ಚಿಲ್ಲರೆ ದಿನಗಳು ಪುನಃ ವಾಪಸಾಗುವುದಿಲ್ಲವೆಂಬುದು ಕಹಿ ಸತ್ಯವೆಂಬ ಅರಿವಿದೆ.
ಈ ಪುರಾಣಗಳೆಲ್ಲಾ ಒತ್ತಟ್ಟಿಗಿರಲಿ. ಇವತ್ತು ಏನಾದರೂ ಟೈಪಿಸಲೇ ಬೇಕೆಂಬ ಹಠ ಹೊತ್ತು ಕುಳಿತಿದ್ದೇನೆ. ಗೆಳೆಯರೆಲ್ಲಾ ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ನಿನ್ನ ಬ್ಲಾಗ್ ಹಿಟ್ಸ್ ಸದಾ ಬಿದ್ದುಕೊಂಡಿರುವ ಹೆಬ್ಬಾವಿನಂತೆ ಆಗಿಬಿಟ್ಟಿದೆಯಲ್ಲಾ ಮಾರಾಯ, [...]
Archive for the ‘ಹಾಳೂ-ಮೂಳು’ Category
ದೀಪ ಉರಿಯುತ್ತಿದೆ…!!!
Posted in ಹಾಳೂ-ಮೂಳು, tagged ಇತ್ಯಾದಿ, ಚಿಂತೆ, ದೀಪ, ಬ್ಲಾಗ್ on September 2, 2008 | 2 Comments »
ಒಂದಿಷ್ಟು ಸುಮ್ಮನೆ ಸಾಲುಗಳು
Posted in ಹಾಳೂ-ಮೂಳು, tagged ಕನ್ನಡಿ, ಕಿಟಕಿ, ಸಾಲುಗಳು on July 17, 2008 | 1 Comment »
ಮುಚ್ಚಿದ ಬಾಗಿಲುಗಳನ್ನು
ತೆರೆದ ಕಿಟಕಿಗಳು
ಸಮಾಧಾನಿಸುತ್ತಿದ್ದವು!
ಕನ್ನಡಿಯ ತುಂಬೆಲ್ಲಾ
ಸೀಳುಗಳು, ಛಿದ್ರ ಚಿತ್ತಾರ
ಪ್ರತಿ ಚೂರೂ ನಿನ್ನ ನೆನಪನ್ನೇ ಸಾರುತ್ತಿತ್ತು
ಬರುವನ್ನೇ ಕಾಯುತ್ತಿತ್ತು.
ಸುಭೀಕ್ಷವಾದ ಒಂದೂರಿನಲ್ಲಿ ಜನರಿಗೆ ತಮ್ಮ ಕೆಲಸದ ಸಮಯ ಗ್ರಹಿಸಲು ಯಾವುದೇ ಮಾಧ್ಯಮ ಇರಲಿಲ್ಲ. ಬುದ್ಧಿವಂತನೊಬ್ಬ ಬೆಳಿಗ್ಗೆ, ಸಂಜೆ ಬಾನಲ್ಲಿ ಹಾರುವ ಹಕ್ಕಿಗಳ ಪುಕ್ಕ ಹಿಡಿದು ಸಮಯ ಗುರುತಿಸಿದ. ಕೆಲವು ದಿನಗಳಲ್ಲಿ ಆ ಊರಿನ ತುಂಬಾ ಪುಕ್ಕಗಳೇ ತುಂಬಿಕೊಂಡವು. ನಂತರ ಪುಕ್ಕಗಳೇ ಸಿಗುತ್ತಿರಲಿಲ್ಲ. ಈ ನಡುವೆ ಊರಿನ ಎಲ್ಲರೂ ಬಿಲ್ಲುವಿದ್ಯಾ ಪ್ರವೀಣರಾಗಿದ್ದರು!
ಬಿಚ್ಚಲು ನವಿಲಿಗೆ ಗರಿಗಳೇ ಇರಲಿಲ್ಲ. ಉದುರಿದ ಎಲ್ಲಾ ಗರಿಗಳ ಮುಖದಲ್ಲೂ ಒಂದೊಂದು ನವಿಲು [...]
ಮುಸುಕಿದ ಮಬ್ಬಿನಲಿ ಕೂತು ಒಂಚೂರು…
Posted in ಹಾಳೂ-ಮೂಳು, tagged ಕರುಣಾಳು ಬಾ ಬೆಳಕೆ, ಬಿಎಂಶ್ರೀ on April 8, 2008 | Leave a Comment »
ನೂರು ಸಾಲುಗಳು ಹೇಳದ್ದನ್ನು ಒಂದು ಚಿತ್ರ ಹೇಳುತ್ತಂತೆ. ಮಾತು ಸವಕಲಾದರೂ ಸತ್ಯ.
ಬ್ಲಾಗ್ ಹೆಡ್ಡರ್ ಗೆ ಬಳಸಿದ ಚಿತ್ರ ಹೇಳುವುದು ಏನೇ ಇರಲಿ ನಾನು ಹೇಳಬೇಕಾದ್ದು ಒಂದಷ್ಟಿದೆ. ನನ್ನ ಮಧುರಾತಿ ಮಧುರ ನೆನಪುಗಳು ಅವಿತು ಕುಳಿತಿವೆ, ಈ ಚಿತ್ರದ ನಡುವಲ್ಲಿ. ಉತ್ತರ ಭಾರತ ಪ್ರವಾಸ ಹೊರಟಿದ್ದ ನಾವು ಕೆಲವು ಪ್ರದೇಶಗಳನ್ನು ನೋಡಿದ್ದೆವು. ಹಲವನ್ನು ನೋಡುವುದರಲ್ಲಿದ್ದೆವು! ಈ ಮಧ್ಯೆ ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರ ಚಿಲ್ಕಾ ದಲ್ಲಿ ಒಂದು ಸುಂದರ ಮುಸ್ಸಂಜೆ ಕಳೆದದ್ದು. ಆಗಲೇ ಮೇಲಿನ ಚಿತ್ರ ಸಿಕ್ಕಿದ್ದು.
ತಲಾ [...]
ಸ್ಪಷ್ಟ ಕನಸೂ…, ಮತ್ತದರ ಅಸ್ಪಷ್ಟ ಹರಿವೂ…
Posted in ಹಾಳೂ-ಮೂಳು on March 1, 2008 | 2 Comments »
ಧೋ ಎಂದು ಪೃಥ್ವಿಯನ್ನೇ ಕಬಳಿಸುವೋಪಾದಿಯಲ್ಲಿ ವರುಣನ ಆರ್ಭಟ. ದಟ್ಟ ಕಾಡು. ಹೆಚ್ಚಾಗಿ ಅದು ನಮ್ಮೂರು. ನಂಗೆ ಆ ಪ್ರದೇಶದ ಇಂಚಿಂಚೂ ಗೊತ್ತೆಂಬ ಹೆಗ್ಗಳಿಕೆಯಿದೆ. ಅಲ್ಲಿ ಏರ್ಪಾಟಾಗಿದ್ದು ರಸಪ್ರಶ್ನೆ ಸ್ಪರ್ಧೆ! ಪ್ರಪಂಚದ ಮೂಲೆ ಮೂಲೆಯಿಂದ ವಿವಿಧ ಹಂತಗಳಲ್ಲಿ ವಿಜಯಿಗಳಾಗಿ ಇಲ್ಲಿ ಆಗಮಿಸಿದ್ದಾರೆ ಸ್ಪರ್ಧಿಗಳು. ಆದರೆ ಅಚ್ಚರಿಯೆಂದರೆ ಹಾಗೆ ಬಂದವರೆಲ್ಲರ ಕೈನಲ್ಲೂ ಮಾರುದ್ದದ್ದ ಹಗ್ಗ! ಬುಡ ಸ್ಪರ್ಧಿಗಳ ಕೈನಲ್ಲಾದರೆ, ತುದಿ ಎಮ್ಮೆ, ಕೋಣಗಳ ಕತ್ತಿನಲ್ಲಿ. ಅವುಗಳೆಲ್ಲವುಗಳ ಕೋಡು ಮಾತ್ರ ಒಂದೇ ಥರ! ದೊಡ್ಡದು..ಅವು ಯಾಕೋ ಗೊತ್ತಿಲ್ಲ.ಸ್ಪರ್ಧೆ ಶುರುವಾಗೇ ಬಿಟ್ಟಿತು. ಪ್ರಶ್ನೆ [...]