Feeds:
Posts
Comments

Archive for September, 2008

ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ್ದವ ಪ್ರತಿ ಹನಿಯಲ್ಲೂ ಅವಳನ್ನೇ ಹುಡುಕುತ್ತಿದ್ದ. ಅವಳು ಕಾಣಲೇ ಇಲ್ಲ. ದಿಗಿಲಾಗಿ ತಲೆಯೆತ್ತಿದ. ಆಕಾಶವಿರಲಿಲ್ಲ ಅಲ್ಲಿ. ಆಕೆಯ ಕಣ್ಣುಗಳಿದ್ದವು!
ಹೀಗೆ ಒಂದು ಬೆಳದಿಂಗಳ ರಾತ್ರಿ ಮಗುವಿಗೆ ತುತ್ತು ಉಣಿಸಲು ತಾಯಿ ಹರ ಸಾಹಸ ಪಡುತ್ತಿದ್ದಳು. ನೀ ತಿನ್ನದಿದ್ದರೆ
 ಚಂದಿರಗೇ ಇವೆಲ್ಲಾ ಎಂದು ಸಣ್ಣಗೆ ಗದರುತ್ತಿದ್ದಳು. ಅವತ್ತು ಚಂದಿರನೇ ಬಂದು ಉಂಡು ಹೋದ ಮತ್ತು ಅವತ್ತಿನಿಂದ ಅವ ಅನಾಥನಾದ!
ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ. ಬರಗಾಲ ಬಂದಿತು. ಬಂದೂಕುಗಳೆಲ್ಲಾ ಸತ್ತು ಹೋದವು. ಮಳೆ ಬಂದಿತು. ಆದರೆ ಗುಂಡುಗಳದ್ದಲ್ಲ!
ಕಪ್ಪು [...]

Read Full Post »

ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್‌ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.
ಲಿಂಕ್ ಇಲ್ಲಿದೆ: http://chitrakulume.wordpress.com/

Read Full Post »

ಹೆಡ್ಡಿಂಗ್ ಬರೆದು ಎನು ಬರೆಯೋದು ಅಂತ ಯೋಚಿಸುತ್ತಿದ್ದೇನೆ. ಅದು ದೀಪವೋ, ಬೆಂಕಿಯೋ ಎಂಬುದನ್ನೂ ನಿರ್ಧರಿಸಲಾರದಂತಾಗಿದ್ದೇನೆ. ಬ್ಲಾಗ್ ಕಡೆಗೊಂದು ದಿವ್ಯ ನಿರ್ಲಕ್ಷ್ಯ ಬಿಸಾಕಿ ತಿಂಗಳುಗಳೇ ಸರಿಯಿತು. ಅಂತದ್ದೊಂದು ನಿರ್ಲಕ್ಷ್ಯಕ್ಕೆ ಸೋಮಾರಿತನವೆನ್ನುವುದೇ ಸೂಕ್ತವೇನೋ. ಅದೇನೇ ಇರಲಿ ಕಳೆದ ತಿಂಗಳು ಚಿಲ್ಲರೆ ದಿನಗಳು ಪುನಃ ವಾಪಸಾಗುವುದಿಲ್ಲವೆಂಬುದು ಕಹಿ ಸತ್ಯವೆಂಬ ಅರಿವಿದೆ.
     ಈ ಪುರಾಣಗಳೆಲ್ಲಾ ಒತ್ತಟ್ಟಿಗಿರಲಿ. ಇವತ್ತು ಏನಾದರೂ ಟೈಪಿಸಲೇ ಬೇಕೆಂಬ ಹಠ ಹೊತ್ತು ಕುಳಿತಿದ್ದೇನೆ. ಗೆಳೆಯರೆಲ್ಲಾ ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ನಿನ್ನ ಬ್ಲಾಗ್ ಹಿಟ್ಸ್ ಸದಾ ಬಿದ್ದುಕೊಂಡಿರುವ ಹೆಬ್ಬಾವಿನಂತೆ ಆಗಿಬಿಟ್ಟಿದೆಯಲ್ಲಾ ಮಾರಾಯ, [...]

Read Full Post »