ಮುಚ್ಚಿದ ಬಾಗಿಲುಗಳನ್ನು
ತೆರೆದ ಕಿಟಕಿಗಳು
ಸಮಾಧಾನಿಸುತ್ತಿದ್ದವು!
ಕನ್ನಡಿಯ ತುಂಬೆಲ್ಲಾ
ಸೀಳುಗಳು, ಛಿದ್ರ ಚಿತ್ತಾರ
ಪ್ರತಿ ಚೂರೂ ನಿನ್ನ ನೆನಪನ್ನೇ ಸಾರುತ್ತಿತ್ತು
ಬರುವನ್ನೇ ಕಾಯುತ್ತಿತ್ತು.
ಸುಭೀಕ್ಷವಾದ ಒಂದೂರಿನಲ್ಲಿ ಜನರಿಗೆ ತಮ್ಮ ಕೆಲಸದ ಸಮಯ ಗ್ರಹಿಸಲು ಯಾವುದೇ ಮಾಧ್ಯಮ ಇರಲಿಲ್ಲ. ಬುದ್ಧಿವಂತನೊಬ್ಬ ಬೆಳಿಗ್ಗೆ, ಸಂಜೆ ಬಾನಲ್ಲಿ ಹಾರುವ ಹಕ್ಕಿಗಳ ಪುಕ್ಕ ಹಿಡಿದು ಸಮಯ ಗುರುತಿಸಿದ. ಕೆಲವು ದಿನಗಳಲ್ಲಿ ಆ ಊರಿನ ತುಂಬಾ ಪುಕ್ಕಗಳೇ ತುಂಬಿಕೊಂಡವು. ನಂತರ ಪುಕ್ಕಗಳೇ ಸಿಗುತ್ತಿರಲಿಲ್ಲ. ಈ ನಡುವೆ ಊರಿನ ಎಲ್ಲರೂ ಬಿಲ್ಲುವಿದ್ಯಾ ಪ್ರವೀಣರಾಗಿದ್ದರು!
ಬಿಚ್ಚಲು ನವಿಲಿಗೆ ಗರಿಗಳೇ ಇರಲಿಲ್ಲ. ಉದುರಿದ ಎಲ್ಲಾ ಗರಿಗಳ ಮುಖದಲ್ಲೂ ಒಂದೊಂದು ನವಿಲು [...]
Archive for July, 2008
ಒಂದಿಷ್ಟು ಸುಮ್ಮನೆ ಸಾಲುಗಳು
Posted in ಹಾಳೂ-ಮೂಳು, tagged ಕನ್ನಡಿ, ಕಿಟಕಿ, ಸಾಲುಗಳು on July 17, 2008 | 1 Comment »