ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ದಿಗಂತದಾಚೆಗೆ ದೊರೆಯಬಹುದಾದ ಅನುಭೂತಿ, ಸೃಷ್ಟಿಯ ಸುಂದರ ದೃಶ್ಯಾವಳಿಗಳ ಮುಖವಾಣಿ, ಬದುಕು ಮತ್ತದರ ಬವಣೆಗಳನ್ನು ಮರೆಯಿಸುವ ತಾಕತ್ತುಳ್ಳ ಜಾದೂಗಾರ…ಮತ್ತಿನ್ನೇನೋ…
ಅದು ಭಾವನೆಗಳ ಕೇಂದ್ರವೂ ಹೌದು ಭಕುತಿಯದ್ದೂ ಸರಿ. ಮನುಷ್ಯ ಮತ್ತು ಮಳೆಯ ನಡುವಿನ ನಂಟು ಕೇವಲ ಕನಸು, ಕನವರಿಕೆ, ನೆನಪುಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ಜೀವಂತಿಕೆಯ, ಉಮೇದಿನ ಚಿಲುಮೆ. ಭೂಮಿಯ ಕ್ಯಾನ್‌ವಾಸ್ ಮೇಲೆ ಮುಗಿಲ ಕುಂಚ ಚಿಮುಕಿಸುವ ಬಣ್ಣದ ಗೊಂಚಲು.
ವರ್ಷ ಋತುವಿನ ಮೊದಲ ಮೋಡ ಆಗಸದಲ್ಲಿ ಇಣಿಕಿದ್ದನ್ನು ಕಂಡು ಖುಷಿ ಪಡದ ಮಂದಿಯಿದ್ದಾರೆಯೇ? [...]
Archive for June, 2008
ಮುಂಗಾರಿನಾಭಿಷೇಕಕೆ ಮಿದುವಾಯಿತು ನೆಲವು…!
Posted in ಪ್ರಬಂಧ on June 26, 2008 | 3 Comments »