Feeds:
Posts
Comments

Archive for May, 2008

ಅಮ್ಮಾ ಎಂದರೆ ಏನೋ ಹರುಷವು… ನಮ್ಮ ಬಾಳಿಗೆ ನೀನೇ ದೈವವು… ಅಮ್ಮನ ಬೆಚ್ಚನೆ ಮಡಿಲಿನ ನೆನಪು ಈಗಾಗಲೇ ಆಗಿರಬೇಕಲ್ವಾ? ಬಾಲ್ಯದ ಆರ್ದೃ ನೆನಪುಗಳ ಬುಟ್ಟಿ ಬಿಚ್ಚಿ ನೋಡಿ. ಅಮ್ಮನಿಲ್ಲದೇ ಕುಡಿಯೊಡೆದ ಕನಸುಗಳೊಂದೂ ಸಿಗದು. ಅಮ್ಮನ ನೆರವಿಲ್ಲದೇ ಸಾಧಿಸಿದ ಕೆಲಸಗಳೂ ವಿರಳ.
        
ಅಪ್ಪನ ಪ್ರವಾಹದಂತ ಕೋಪಕ್ಕೆ ತುತ್ತಾಗಿ ಅಳುಮೋರೆ ಮಾಡಿಕೊಂಡು ಮೂಲೆಗೆ ಮೊರೆ ಹೊಕ್ಕಾಗ ರಮಿಸಿದ, ಕಷ್ಟದ ಪರೀಕ್ಷೆ ಎದುರಿಸಿ ಬಂದು ಫೇಲಾಗುವ ಭೀತಿಯಲ್ಲಿದ್ದಾಗ ಧೈರ್ಯ ತುಂಬಿದ, ಮೊದಲ ಸಲ ಬೀಡಿ ಸೇದಿ ಸಿಕ್ಕಿ ಬಿದ್ದಾಗ ಬಾಸುಂಡೆ ಬರುವಂತೆ ಬಾರಿಸಿದರೂ [...]

Read Full Post »

ಅಟ್ಟದ ಮೇಲೆ ನೇರ
ಬಿದ್ದ ಬಿಸಿಲ ಕೋಲು
ಅಲ್ಲಿನ ಸಂದಿಗೊಂದುಗಳ ನಡುವೆ
ನರಳಿ, ಕೊನೆಗೊಮ್ಮೆ ಹೊರಳಿ
ಅಂಗಳದಲ್ಲಿ ಅರಳುತ್ತಿತ್ತು,
ಸ್ಮಿತೆ ನೆರಳಲ್ಲಿದ್ದಳು!
ಮಾಡಿಗೆ ಅಲ್ಲಲ್ಲಿ ಸಿಕ್ಕಿಸಿದ
ಬೆಳ್ಳಿ ಹಾಳೆಗಳನ್ನು ತೇವವಾಗಿಸಿ
ಅದರ ಇರುವನ್ನೂ
ಸೋಲಿನ ಇತಿಹಾಸವಾಗಿ
ಜೋರುಮಳೆ,
ಸ್ಮಿತೆಯನ್ನು ತೋಯಿಸಲಿಲ್ಲ!
ಕೌದಿಯ ಮೇಲೆರಡು ಕಂಬಳಿ
ಹೊರಗೆ ಚಾಚಿದ ಕುಳಿರ್ಗಾಳಿ
ಅದೆಲ್ಲಿಂದಲೋ ನುಸುಳಿ
ಹಲ್ಲುಗಳ ನಡುವೆ ಕಾದಾಟ
ಮೈಗೆ ಮತ್ತಷ್ಟು ಹೊದಿಕೆಯ ಹಸಿವೆ,
ಸ್ಮಿತೆ ಗಪ್ಪಾಗಿ ನಿದ್ರಿಸಿದ್ದಳು!
ಕೊಲ್ಲಿಯ ಅಲೆಗಳೇ ತಂದು ಕೊಡವಿದ
ಚಿಪ್ಪು ಶಂಖಗಳು !!
ಸ್ಮಿತೆ ಸಮುದ್ರವಾದಳು,
ತೆರೆಯಾದಳು;
ವಿಪರ್ಯಾಸ,
ತೀರಕ್ಕೆ ತಟ್ಟಲೇ ಇಲ್ಲ!!!
 

Read Full Post »