ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸಬಹ್ಮದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪ್ಮಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ, ಸುಮ್ಮನಾಗುತ್ತನೆ!
ಸತ್ಯವಾಗಿ ಹೇಳುತ್ತೇನೆ, ನೀನಂದು ನನ್ನ ಮರೆತೆಯೆಂದು ತಿಳಿದ ಕ್ಷಣ ನಾನು ಭೋರ್ಗರೆವ ನದಿಯಾಗಲಿಲ್ಲ. ಜಿಟಿ ಜಿಟಿ ಸುರಿಯುವ ಮಳೆಯಾಗಲಿಲ್ಲ. ತಣ್ಣಗಿರುವ ಧರಣಿಯ ಸ್ಥಿತಿಗೆ ಹೋಲಿಸಬಹುದಿತ್ತಷ್ಟೇ. ನೀನು ಕೋಪಿಸಿಕೊಂಡರೂ ಇನ್ನು ಚಿಂತಿಲ್ಲ! ನಾನು ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವವನೇ… [...]
Archive for February, 2008
ಮಳೆ ನಿಂತು ಹೋದ ಮೇಲೆ…
Posted in ಪ್ರಬಂಧ, tagged ಅಮ್ಮ, ಅವಳು, ಕಡಲು, ಪ್ರೀತಿ, ಮಳೆ on February 1, 2008 | 5 Comments »
ಸೊಕ್ಕಿನ ಬೆಕ್ಕಿನ ಬಗ್ಗೆ ಒಂದಿಷ್ಟು…
Posted in ಕವನ, tagged ಬೆಕ್ಕು, ಮಾಯಾಂಗನೆ, ಮೀಸೆ, ಲಂಡನ್ನಿನ ರಾಣಿ, ಸೊಕ್ಕು on February 1, 2008 | 2 Comments »
ಬೆಕ್ಕುಗಳಿಗೆ ಬಡಿವಾರವಿಲ್ಲ
ಮೆಲ್ಲನೆ ತೊಡೆಗೇರಿಸುತ್ತವೆ ಗಲ್ಲ
ಹೆಂಗಸರೋ ಗಂಡಸರೋ
ಅಥವಾ ಮತ್ತಿನ್ಯಾರೋ
ವಯಸಿನಂತರವೂ ಇಲ್ಲ
ಲಿಂಗ ಬೇಧವೂ ಇಲ್ಲ
ಉಣ್ಣುವ, ಮಲಗುವ
ಮುಂಚಿನ ಹೊರತು ರಿವಾಜೂ ಸಲ್ಲ!
ಮಡಿಲು ಬೆಚ್ಚಗಿದ್ದರೆ ಸರಿ
ಮಡಿಲೇರಿದ ಬೆಕ್ಕು
ಅಂಗಾಲು ಅಗಲಿಸಿ ನೆಕ್ಕು
ನೀಟಾಗಿ ಮಡಿಸಿ ಮಲಗಿ-
ದರೆ ದೃಷ್ಟಿಯಾಗಬೇಕು
ಮರುದಿನ ತಟ್ಟೆಗೆ ಹಾಕಿದ
ಹಾಲನ್ನೂ ಬಿಡೋವಷ್ಟು
ಅಥವಾ ಕುಡಿದು ಬಿಡೋವಷ್ಟು!
ಪಾಪಿ ಬೆಕ್ಕುಗಳು ಪಾಪದ
ಹಕ್ಕಿಗಳನ್ನು ಹೊಟ್ಟೆಗಾಕಿಕೊಳ್ಳುತ್ತವೆ
ಬರೀ ಚಕ್ಕಳದ ಗೂಡಿನ
ಚೆಂದದ ಬಟ್ಟೆತೊಟ್ಟವಾದರೂ
ತಿನ್ನುವ ಚಪಲವೇಕೋ?
ಮೊನ್ನೆ ಚಿಟ್ಟೆಯ ರೆಕ್ಕೆಯ
ಬಣ್ಣದ ರವೆ ನಮ್ಮನೆ ಬೆಕ್ಕಿನ
ಬಲ ಮೀಸೆಗಂಟಿತ್ತು!
ಬೆಕ್ಕು ನಮ್ಮನೆಯದೋ?
ಲಂಡನ್ನಿನ ರಾಣಿಯದೋ?
ಉದ್ದದ ನಿಲುವಂಗಿ ತೊಟ್ಟ
ಮಾಯಾಂಗನೆಯದೋ?
ಬೆಕ್ಕು ಬೆಕ್ಕಲ್ಲದೇ ಮತ್ತೇನಲ್ಲ!!!